ಎಪಿಗ್ರಾಫಿಯ ಬಮ್ರ್ಯಾನಿಕ ( Epigraphia Birmanica)
	ಬರ್ಮ ದೇಶದ ಚಾರಿತ್ರಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಸಂಗತಿಗಳನ್ನು ತಿಳಿಯಪಡಿಸುವ ಶಾಸನಗಳನ್ನು ಒಂದೆಡೆ ಸಂಗ್ರಹಿಸಿ ಪ್ರಸಿದ್ಧಪಡಿಸುವ ಸಲುವಾಗಿ ಹುಟ್ಟಿದ ನಿಯತಕಾಲಿಕ ಪತ್ರಿಕೆ. ಮೊದಲು ಬರ್ಮದ ಶಾಸನ ವಿಷಯಗಳನ್ನೆಲ್ಲ ಎಪಿಗ್ರಾಫಿಯ ಇಂಡಿಕದ ಒಂದು ಭಾಗವಾಗಿ ಪ್ರಸಿದ್ಧಪಡಿಸಬೇಕೆಂದು ಆಲೋಚಿಸಲಾಗಿತ್ತು. ಆದರೆ ವಿಷಯಬಾಹುಳ್ಯ ಮತ್ತು ವೈಶಿಷ್ಟ್ಯಗಳನ್ನು ಗಮನಿಸಿ ಬರ್ಮೀಯ ವಿಷಯಗಳಿಗೆ ಪ್ರತ್ಯೇಕಪತ್ರಿಕೆಯೊಂದರ ಅಗತ್ಯವಿದೆಯೆಂಬ ಅಂಶ ಸ್ಪಷ್ಟವಾದ ಮೇಲೆ ಬಮ್ರ್ಯಾನಿಕ ಪತ್ರಿಕೆಯನ್ನು ಹೊರತರಲಾಯಿತು. ಈ ಪತ್ರಿಕೆಯ ಮೊದಲ ಸಂಪುಟ ಬರ್ಮದ ಪುರಾತತ್ವಶಾಖೆಯ ಮುಖ್ಯಸ್ಥರಾದ ಡ್ಯುರಾಯಸೆಲ್ ಎಂಬ ವಿದ್ವಾಂಸನ ಸಂಪಾದಕತ್ವದಲ್ಲಿ ಪ್ರಕಟವಾಯಿತು (1919). ಇದರಲ್ಲಿ 1112ರ ಕಾಲದ ಮ್ಯಾಜೇದಿಯ ಶಾಸನಗಳ ಪಾಲಿ, ಪ್ಯು ತಲೈಂಗ (ಮೋ) ಮತ್ತು ಬರ್ಮ ಭಾಷೆಯಲ್ಲಿರುವ ಪ್ರತಿಗಳನ್ನು ಪ್ರಸಿದ್ಧಪಡಿಸಲಾಗಿದೆ. ಈ ಪತ್ರಿಕೆಯ ಕೇವಲ 4 ಸಂಪುಟಗಳು ಪ್ರಕಟವಾಗಿದ್ದು ನಾಲ್ಕನೆಯ ಸಂಪುಟ ಪ್ರಕಟವಾದ (1936) ಅನಂತರ ಪತ್ರಿಕೆಯನ್ನು ನಿಲ್ಲಿಸಲಾಯಿತು.

(ಜಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ